•  
  •  
  •  
  •  
Index   ವಚನ - 674    Search  
 
ನೆನಹು ನೆನೆವ ಮನದಲ್ಲಿಲ್ಲ, ತನುವಿನಲ್ಲಿ ಆಸೆಯಿಲ್ಲ. ನೆನೆವ ಮನವನತಿಗಳೆದ ಘನಕ್ಕೆ ಘನವೆಂತೆಂಬೆ? ತನ್ನಲ್ಲಿ ತಾನಾಯಿತ್ತು, ಭಿನ್ನವಿಲ್ಲದೆ ನಿಂದ ನಿಜವು. ಅನಾಯಾಸದ ಅನುವ ಕಂಡು ಆನು ಬೆರಗಾದೆನಯ್ಯಾ. ಎಂತಿದ್ದುದು ಅಂತೆ ಅದೆ, ಚಿಂತೆಯಿಲ್ಲದನುಭಾವ ಗುಹೇಶ್ವರಾ.
Transliteration Nenahu neneva manadallilla, tanuvinalli āseyilla. Neneva manavanatigaḷeda ghanakke ghanaventembe? Tannalli tānāyittu, bhinnavillade ninda nijavu. Anāyāsada anuva kaṇḍu ānu beragādenayyā. Entiddudu ante ade, cinteyilladanubhāva guhēśvarā.
Hindi Translation याद की याद करना मन नहीं, शरीर की आशा पहले ही नहीं। याद किये मन को तिरस्कार किया घन को घन क्या कहूँ? अपने में खुद बना, भिन्न रहित खडा सत्य । याद नाश होते देख चकित हुआ। जैसा था वैसा ही है चिंता रहित अनुभाव गुहेश्वरा। Translated by: Eswara Sharma M and Govindarao B N
Tamil Translation நினைவை நினைக்க மனமில்லை, உடலுணர்வு முன்பே இல்லை நினையும் மனத்தை மீறிய முழுமையை என்னென்பேன்? பின்னமற்று நின்றமுழுமை, தன்னிடம் தானாயிற்று. நினைவைஅழித்து, முழுமையைக் கண்டு வியப்புற்றேன், மாறுபாடற்ற ஒரேவடிவு, இடையீடற்ற அனுபவம் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅತಿಗಳೆ = ಮೀರು; ಘನಕ್ಕೆ ಘನ = ಪರಿಪೂರ್ಣ; Written by: Sri Siddeswara Swamiji, Vijayapura