Index   ವಚನ - 274    Search  
 
ಮುನ್ನ ಶಿವ ಕೊಟ್ಟ ಆಯುಷ್ಯವುಂಟೆಂದು, ವ್ಯಾಘ್ರವ ಗುಹೆಯಿಂ ಇನ್ನು ತೆಗೆವರುಂಟೆ? ಉನ್ನತ ಉತ್ಪತ್ಯವೆಲ್ಲಾ ಶಿವನಿಂದಾಯಿತ್ತು. ನಿನ್ನ ಧನವನುಂಡು, ತಮ್ಮ ಅಜ್ಞಾನದಿಂದ ತಾವರಿಯದೆ ಹೋಗಿ, ತನ್ನ ಕಾಡಿನ ಮೇಲೆ ಕಾಗೆಗೆ ಕಾಳ ಚಲ್ಲಿ, ಪಿತರುಂಡೆರೆಂದು ಕುನ್ನಿಗಳು ಮರುಳಾದರು ನೋಡಾ, ಕಲಿದೇವರದೇವ.