Index   ವಚನ - 276    Search  
 
ಮೂರುಸ್ಥಲದ ಮೂಲವನರಿಯರು. ಪುಣ್ಯಪಾಪವೆಂಬ ವಿವರವನರಿಯರು. ಇಹಪರವೆಂಬುದನರಿಯರು. ಇವರನೆಂತು ಮಹಂತಿನ ದೇವರೆಂಬೆನಯ್ಯಾ? ಹೊನ್ನ ವಸ್ತ್ರದವನ ಬಾಗಿಲಕಾಯ್ವ ಪಶುಪ್ರಾಣಿಗಳ ದೇವರೆನ್ನಬಹುದೇನಯ್ಯಾ? ಜಗದ ಕರ್ತನ ವೇಷವ ಧರಿಸಿಕೊಂಡು, ಸರ್ವರಿಗೆ ಬೇಡಿ ಕೊಟ್ಟಡೆ ಒಳ್ಳೆಯವ, ಕೊಡದಿರ್ದಡೆ ಕೆಟ್ಟವನು. ಪಾಪಿ ಚಾಂಡಾಲಿ ಅನಾಚಾರಿ ಎಂದು ದೂಷಿಸಿ, ಒಳಹೊರಗೆಂದು ಬೊಗಳುವ ಮೂಳಮಾನವರಿಗೆ ಮಹಂತಿನ ಆಚರಣೆ ಎಲ್ಲಿಯದೊ? ಇಲ್ಲವೆಂದ, ಕಲಿದೇವರದೇವ.