Index   ವಚನ - 278    Search  
 
ಮೇಲಾಗಿ ಒಬ್ಬ ಪ್ರಸಾದವನಿಕ್ಕಿದಡೆ ತಳವಾಗಿ ಒಬ್ಬ ಪ್ರಸಾದವ ಕೊಂಡಡೆ ಮೇಲಾಗಿ ಪ್ರಸಾದವನಿಕ್ಕಿದಾತ ಮೇಲೇಳು ಲೋಕಕ್ಕೆ ಹೋಹನೆ? ತಳವಾಗಿ ಪ್ರಸಾದವ ಕೊಂಡಾತ ತಳಗೇಳು ಲೋಕಕ್ಕೆ ಹೋಹನೆ? ಅವರಿಬ್ಬರ ಸತ್ಯ ಒಂದೇ ಕಾಣ ಕಲಿದೇವಯ್ಯ.