Index   ವಚನ - 279    Search  
 
ರಂಗದಕ್ಕಿಯ ಹೊಯಿಯೆಂದು ನಿಂದ ನಾಲ್ವರಿಗೆ, ತಂದಲ್ಲಿ ಶ್ರೀಕಳಸವ ಹಿಡಿಸಿ, ಭಕ್ತಿಗೆ ಚೆಂದವಾಯಿತ್ತು. ಮುಂದಲ್ಲಿ ಏನ ಬೇಡಲುಂಟು? ಬೆಂದ ಮನೆಯಲ್ಲಿ ಹುರಿಗಾವಲಿಯಾದಡೆಯೂ ಬರಲಿಯೆಂದು, ಶ್ರೀಕಳಸಕ್ಕೆ ದಂಡವನಾಗಳೆ ಕೊಡುವರೆ, ಕಲಿದೇವಯ್ಯಾ.