Index   ವಚನ - 280    Search  
 
ರೂಪನರ್ಪಿತವ ಮಾಡುವರು ತಮತಮಗೆ, ರುಚಿಯನರ್ಪಿತವ ಮಾಡುವ ಭೇದವನರಿಯರು ನೋಡಾ. ಅವರನೆಂತು ಭಕ್ತನೆಂಬೆ? ಅವರನೆಂತು ಪ್ರಸಾದಿಗಳೆಂಬೆ? ರೂಪನು ಲಿಂಗಕ್ಕೆ ಕೊಟ್ಟು, ರುಚಿಯ ತಾವು ಭುಂಜಿಸುವ ವ್ರತಗೇಡಿಗಳಿಗೆ ಪ್ರಸಾದವುಂಟೆ? ಕಲಿದೇವಯ್ಯ.