ಜಗದಗಲದ ಗಗನದ ಆನೆ ಕನಸಿನಲ್ಲಿ ಬಂದು ಮೆಟ್ಟಿತ್ತ ಕಂಡೆ.
ಅದೇನೆಂಬೆ ಹೇಳಾ? ಮಹಾಘನವನದೆಂತೆಂಬೆ ಹೇಳಾ?
ಗುಹೇಶ್ವರನೆಂಬ ಲಿಂಗವನರಿದು ಮರೆದಡೆ,
ಲೋಯಿಸರದ ಮೇಲೆ ಬಂಡಿ ಹರಿದಂತೆ!
Transliteration Jagadagalada gaganada āne kanasinalli bandu meṭṭitta kaṇḍe.
Adēnembe hēḷā? Mahāghanavanadentembe hēḷā?
Guhēśvaranemba liṅgavanaridu maredaḍe,
lōyisarada mēle baṇḍi haridante!
Hindi Translation दुनिया भर चौडा गगन का हाथी सपने में आकरदबा देखा।
वह क्या कहूँ, महाघन को कैसे कहूँ, कहो ?
गुहेश्वर कहना लिंग जानकर भूले तो
घी कुंवार पर गाड़ी चलेजैसे।
Translated by: Eswara Sharma M and Govindarao B N
Tamil Translation பரந்துபட்ட ஆகாயத்தை யானை கனவில் வந்து
துகைத்ததைக் கண்டேன்: அதனை என்னென்பேன்,
முழுமையை எப்படி விவரிப்பது கூறாய்?
குஹேசுவரனெனும் இலிங்கத்தை அறிந்து மறப்பின்
நாகதாளியிலையின் மீது வண்டி ஏறியதனையதாம்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಿ = ಆ ಘನಲಿಂಗವೆ ತಾನು ಎಂದು ತಿಳಿ; ಆನೆ = ಆ ಚಿದ್ಘನವಸ್ತುವೆ ನಾನು ಎಂಬ ಪವಿತ್ರ ಅಹಂಭಾವ; ಕನಸು = ಉನ್ಮನಿ ಅವಸ್ಥೆ; ಗಗನ = ಚಿದ್ಭಯಲು, ಚಿದ್ಘನವಸ್ತು; ಮರೆ = ಆ ಲಿಂಗವು ತಾನೆಂಬ ಭಾವ ಕೂಡ ಅಡಗಿಹೋಗು; ಮೆಟ್ಟು = ಜೀವಭಾವವನ್ನು ನಾಶಗೊಳಿಸು; ಲೋಯಿಸರ = ಲೋಳಸರ; ಹರಿ = ಹಾಯು;
Written by: Sri Siddeswara Swamiji, Vijayapura