Index   ವಚನ - 341    Search  
 
ಹೆತ್ತ ತಾಯಿ ತಂದೆ ಬಂಧು ಬಳಗ ಗತಿ ಸುತರಾದ ಸೋದರರುಗಳಲ್ಲಿ ಭವಿಯಾಗಿದ್ದವರ ಮೋಹ ಬಿಟ್ಟಲ್ಲದೆ ಶಿವಭಕ್ತಿಯ ನೆಲೆ ಸಿಕ್ಕದು. ಭಕ್ತಿಯ ಪಥವನರಿಯದೆ, ಯುಕ್ತಿಹೀನರು ತಮ್ಮ ಹೆತ್ತ ತಾಯಿ ತಂದೆಯ ಲೋಭಕ್ಕೆ ಸಾಹಿತ್ಯ ಸಂಬಂಧವ ಕೊಂಡು, ಮೃತ್ಯುಮಾರಿಯ ಎಂಜಲತಿಂಬ ನಾಯಿಯ ಹೊಲೆಸೂತಕ ಬಿಡದೆ ಹೋಯಿತ್ತು. ಕಟ್ಟಿದ ಕೂರಲಗಿನ ಮೊನೆಯಲ್ಲಿ ಸಿಕ್ಕಿಕೊಂಡು ಸತ್ತು ಹೋದವರ ಸಿಂಹದ ಹೋಲಿಕೆಗೆ ಮರನ ಚೋಹವ ಮಾಡಿ, ಹೊತ್ತುಕೊಂಡು [ಬೀ]ರಗೂಳನುಂಬ ದುಃಕರ್ಮಿಗಳ ಶಿವಭಕ್ತಂಗೆ ಸರಿಯೆಂದು ಬೊಗಳುವ ನಾಯಿಗೆ ಹತ್ತೆಂಟುಬಾರಿ ತಿರುಗುವ ನರಕ ತಪ್ಪದೆಂದ, ಕಲಿದೇವರದೇವಯ್ಯ.