ಸೊಪ್ಪಡಗಿದ ಸುಮ್ಮಾನಿಗಳವರಲ್ಲಿ
ಗತಿಯನರಸುವರೆ?
ಅವರಲ್ಲಿ ಮತಿಯನರಸುವರೆ?
ಅಂಗವೆಲ್ಲ ನಷ್ಟವಾಗಿ ಲಿಂಗಲೀಯವಾದವರಲ್ಲಿ
ಗತಿಯನರಸುವರೆ?
ಅವರಲ್ಲಿ ಮತಿಯನರಸುವರೆ?
ಗುಹೇಶ್ವರನೆಂಬ ನಿಜ ನಿಂದವರಲ್ಲಿ?
Hindi Translationनिरहंकारि अनुभावियों में गति ढूँढ सकते ?
उनमें मति ढूँढ सकते ?
सर्वांग नष्ट होकर लिंग में समाहुए में गति ढूँढ सकते ?
उनमें मति ढूँढ सकते,
गुहेश्वर जैसे निज ज्ञानियों में ?
Translated by: Eswara Sharma M and Govindarao B N
English Translation
Tamil Translationஅமைதியுற்ற அனுபவமுள்ளோரிடம்,
மாறுபட்ட நினைவு இருக்குமோ?
அவர்களிடம் மாறுபட்ட அறிவு இருக்குமோ?
உடலுணர்வற்று, இலிங்கத்துடனினைந்தோரிடம்
மாறுபட்ட நினைவைத் தேடுவரோ?
குஹேசுவரனெனும் வெட்டவெளியில் இணைந்தோருக்கு,
அவர்களிடம் மாறுபட்ட அறிவு இருக்குமோ?
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಐಕ್ಯಸ್ಥಲ
ಶಬ್ದಾರ್ಥಗಳುಅಂಗ = ನಾನು ಎಂಬ ಭಾವವುಳ್ಳ ಜೀವಚೇತನ, ಜೀವಭಾವ; ಗತಿ = ಭಿನ್ನ ನೆನಹು; ನಿಜನಿಂದವರು = ನಿಜದಲ್ಲಿ ನಿಂದವರು, ಪರವಸ್ತುವಿನಲ್ಲಿ ಒಂದುಗೂಡಿದವರು; ಮತಿ = ಭಿನ್ನ ಜ್ಞಾನ; ಲೀಯವಾಗು = ಬೆರೆದು ಒಂದಾಗು; ಸುಮ್ಮಾನಿಗಳು = ಪ್ರಸನ್ನ ಚೇತಸರು, ಅನುಭಾವಿಗಳು; ಸೊಪ್ಪಡಗು = ಶಾಂತವಾಗು, ಅಹಂಕಾರವಳಿದಿರು; Written by: Sri Siddeswara Swamiji, Vijayapura