ಕ್ರಿಯಾಭಾವದಲ್ಲಿ ನಿಂದು ಮಾಡುವನ ಅರ್ಚನೆ
ಕಾರ್ಪಾಸದಂತಿರಬೇಕು.
ಕಲ್ಪದ್ರುಮದ ಬಿತ್ತಿನ ಸಿಪ್ಪೆಯಂತಿರಬೇಕು.
ವರುಣಕಿರಣದ ಸಂಚಾರ ಸಂಚರಿಸುವಂತಿರಬೇಕು.
ಇದು ಕ್ರೀಶುದ್ಧತೆ, ಅರ್ಕೇಶ್ವರಲಿಂಗವನರಿವುದಕ್ಕೆ.
Art
Manuscript
Music
Courtesy:
Transliteration
Kriyābhāvadalli nindu māḍuvana arcane
kārpāsadantirabēku.
Kalpadrumada bittina sippeyantirabēku.
Varuṇakiraṇada san̄cāra san̄carisuvantirabēku.
Idu krīśud'dhate, arkēśvaraliṅgavanarivudakke.