ವಚನ - 69     
 
ಅಕ್ಷರವ ಬಲ್ಲೆವೆಂದು ಅಹಂಕಾರವೆಡೆಗೊಂಡು, ಲೆಕ್ಕಗೊಳ್ಳರಯ್ಯಾ. ಗುರುಹಿರಿಯರು ತೋರಿದ ಉಪದೇಶದಿಂದ; ವಾಗದ್ವೈತವನೆ ಕಲಿತು ವಾದಿಪರಲ್ಲದೆ ಆಗು-ಹೋಗೆಂಬುದನರಿಯರು. ಭಕ್ತಿಯನರಿಯರು ಮುಕ್ತಿಯನರಿಯರು ಮತ್ತೂ ವಾದಕ್ಕೆಳಸುವರು. ಹೋದರು, ಗುಹೇಶ್ವರಾ ಸಲೆ ಕೊಂಡಮಾರಿಗೆ.