ನಿರ್ವಿಕಲ್ಪಿತವೆಂಬ ನಿಜದೊಳಗಯ್ಯಾ,
ನಿರಹಂಭಾವದಲ್ಲಿ ನಾನಿದ್ದೆನಯ್ಯಾ.
ನೋಡಿಹೆನೆಂದಡೆ ನೋಡಲಿಲ್ಲ,
ಕೇಳಿಹೆನೆಂದಡೆ ಕೇಳಲಿಲ್ಲ.
ಘನನಿರಂಜನದ ಬೆಳಗಿಂಬಾದುದನೇನೆಂಬೆ
ಗುಹೇಶ್ವರಾ?
Transliteration Nirvikalpitavemba nijadoḷagayyā,
nirahambhāvadalli nāniddenayyā.
Nōḍ'̔ihenendaḍe nōḍalilla,
kēḷihenendaḍe kēḷalilla.
Ghananiran̄janada beḷagimbādudanēnembe
guhēśvarā?
English Translation 2 In reality beyond conceit,
Beyond self-consciousness,
O Lord!
I have been.
If I would see, I do not see.
If I would hear, I cannot hear.
What shall I say,
O Guheśvara?
The great white Light
Is everywhere!
Hindi Translation निर्विकल्पित जैसे निज में।
निरहंभाव में मैं हूं ।
देखे कहें तो देखा नहीं, सुने कहें तो सुना नहीं,
घन निरंजन की चमक सब ओर फैली है गुहेश्वर ।
Translated by: Eswara Sharma M and Govindarao B N
Tamil Translation விகற்பமற்ற பரம்பொருளுடன்
நான் எனும் உணர்வற்று இருந்தேன் ஐயனே,
காண வேண்டுமெனின் காணவில்லை,
கேட்க வேண்டுமெனின் கேட்கவில்லை,
மெய்ப்பொருளுடன் ஞானப்பேரொளியில்
இணைந்ததை என்னென்பேன் குஹேசுவரனே!
Translated by: Smt. Kalyani Venkataraman, Chennai
ಶಬ್ದಾರ್ಥಗಳು ನಿಜವು = ಮಹಾಘನವು; ನಿರಂಜನ = ಪರಿಶುದ್ದ, ಅಮೂರ್ತ, ಅಲಿಪ್ತ; ನಿರಹಂಭಾವ = ನಾನು ಎಂಬ ಭಾವವಿಲ್ಲದಿರುವುದು; ನಿರ್ವಿಕಲ್ಪಿತ = ವಿಕಲ್ಪಿತವಲ್ಲದ, ರಚನೆಗೊಳ್ಳದ, ವಿಭಕ್ತವಾಗದ;
Written by: Sri Siddeswara Swamiji, Vijayapura