ಅಂಗದೊಳಗಣ ಸವಿ,
ಸಂಗದೊಳಗಣ ರುಚಿ,
ಅಂಗನೆಯ ನಖದೊಳಗೆ ಬಂದು ಮೂರ್ತಿಯಾಯಿತ್ತು!
ಚಂದ್ರಕಾಂತದ ಗಿರಿಗೆ ಬಿಂದು ತೃಪ್ತಿಯ ಸಂಚ!
ಅದರಂದದೊಳಗಣ ಭ್ರಮೆಯ ಪಿಂಡದಾಹುತಿ ನುಂಗಿತ್ತು.
ಚಂದ್ರಮನ ಷೋಡಶ ಕಳೆಯ ಇಂದ್ರನ ವಾಹನ ನುಂಗಿ,
ಗುಹೇಶ್ವರನೆಂಬ ನಿಲವ ನಖದ ಮುಖ ನುಂಗಿತ್ತು!
Transliteration Aṅgadoḷagaṇa savi,
saṅgadoḷagaṇa ruci,
aṅganeya nakhadoḷage bandu mūrtiyāyittu!
Candrakāntada girige bindu tr̥ptiya san̄ca!
Adarandadoḷagaṇa bhrameya piṇḍadāhuti nuṅgittu.
Candramana ṣōḍaśa kaḷeya indrana vāhana nuṅgi,
guhēśvaranemba nilava nakhada mukha nuṅgittu!
Hindi Translation अंग में रही मिठास, संग में रही रुची,
अंगना के नख में आकर मूर्ति हुई थी।
चंद्रकांत गिरि को बिंदु तृप्ति का रहस्य !
उसके अंदर के भ्रम को पिंड दाहुति निगली !
चंद्रमा की षोडश कला को इंद्र वाहन निगला,
गुहेश्वर जैसी स्थिति को नख मुख निगला था।
Translated by: Eswara Sharma M and Govindarao B N
Tamil Translation உடல், மனப் பேரின்பம் இலிங்க இணைவுச்சுவை,
பெண்ணின் கையிலே வந்து நிலைத்தது.
சந்திரகாந்த மலையிலே பிந்துவைப் பருகிய நிறைவு,
உன்மனி நிலையிலே மருட்சியை இலிங்கத் திலர்ப்பிக்க,
சந்திரனின் தண்ணொளியை, பரம்பொருளின்பேருணர்வு சூழ,
குஹேசுவரனெனும் நிலையை, சூனிய ஞானவெளி சூழ்ந்தது.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂಗ = ತನು ಹಾಗೂ ಮನ, ಸ್ಥೂಲಾಂಗ ಹಾಗೂ ಸೂಕ್ಷ್ಮಾಂಗ; ಅಂಗನೆ = ಶರಣ; ಅಂದ = ವ್ಯವಸ್ಥೆ; ಅದು = ಉನ್ಮನಿ; ಇಂದ್ರನ ವಾಹನ = ಮಹಾಘನದ ಮಹದ್ಭಾವ.; ಚಂದ್ರಕಾಂತದ ಗಿರಿ = ಮನದ ಕೊನೆಯ ಮೊನೆ, ಉನ್ಮನಿಸ್ಥಿತಿ; ಚಂದ್ರಮನ ಷೋಡಶಕಳೆ = ಪರಿಪೂರ್ಣ ಪ್ರಶಾಂತಿಯ ಬೆಳಗು; ತೃಪ್ತಿ = ಪರಮ ಆನಂದ; ನಖ = ಸದ್ಭಾವ ಹಸ್ತ; ನಖದ ಮುಖ = ಸರ್ವಾಂತ್ಯದ ನಿಲುವು, ನಿಶ್ಯೂನ್ಯ; ಪಿಂಡದಾಹುತಿ = ಶರಣನು ಘನಲಿಂಗದಲ್ಲಿ ಸಮರ್ಪಿತಗೊಳ್ಳುವಿಕೆ; ಬಿಂದು = ಅನುಭಾವಾಮೃತ ಬಿಂದು; ಭ್ರಮೆ = ಘನಲಿಂಗವೆ ತಾನೆಂಬ ಶಿವೋಹಂ ಭಾವ(ಆ ಭಾವವೂ ಬಯಲಾಗಿ ಹೋಗುವುದರಿಂದ ಅದೊಂದು ಬಗೆಯ ಭ್ರಮೆಯೆ); ಮೂರ್ತಿಯಾಗು = ವ್ಯಕ್ತವಾಗು; ಸಂಗ = ಲಿಂಗಸಂಗ; ಸಂಚ = ರಹಸ್ಯ; ಸವಿ = ರುಚಿ, ಸುಖ;
Written by: Sri Siddeswara Swamiji, Vijayapura