•  
  •  
  •  
  •  
Index   ವಚನ - 694    Search  
 
ಬಯಲ ಬೆರಗಿನ ಸುಖದ ಸವಿಯ ಬೆರಗಲ್ಲದೆ ಕಾಣೆ! ಕಾಣೆನೆಂಬ ನುಡಿಗೆಡೆಯ ಕಾಣೆ! ಕುರುಹುಗೆಟ್ಟು ಅರಿವ ನೆರೆಯರಿದು ಬೆರಸಿದೆನೆಂಬ ಬರುನುಡಿಯ ನುಡಿಗೆ ನಾಚಿದೆನಯ್ಯಾ ಗುಹೇಶ್ವರಾ.
Transliteration Bayala beragina sukhada saviya beragallade kāṇe! Kāṇenemba nuḍigeḍeya kāṇe! Kuruhugeṭṭu ariva nereyaridu berasidenemba barunuḍiya nuḍige nācidenayyā guhēśvarā.
Music Courtesy:
Hindi Translation शून्य विस्मय सुख की मिठास परमाश्चर्य है । न देखी बोली का अवकाश नहीं देख ! चिह्न बिगड जाने की रीति न जानकर जोडने की व्यर्थ बातों की बोली पर लजा गया गुहेश्वरा। Translated by: Eswara Sharma M and Govindarao B N
Tamil Translation ஞானவெளியின் அற்புத இன்பச்சுவை அற்புதமாம், காணேன் எனும் சொல்லிற்கு வாய்ப்புளதோ! அடையாளமழிய, அறிவை மாறுபாடற்ற உணர்வொடு அறிந்து, அறிந்தேனேனும் பொருளற்ற சொல்லிற்கு வெட்கினேன் ஐயனே, குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಿವು = ಅರಿವಿನ ಘನವಸ್ತು; ಕುರುಹು = ಮೂರ್ತವಸ್ತು, ಪರಿಮಿತಭಾವ.; ನೆರೆಯರಿ = ಅಭಿನ್ನಭಾವದಿಂದ ಅನುಭವಿಸು.; ಬರುನುಡಿ = ಅರ್ಥವಿಲ್ಲದ ಮಾತು.; Written by: Sri Siddeswara Swamiji, Vijayapura