Index   ವಚನ - 29    Search  
 
ಕರ್ಮದ ಧರ್ಮಂಗಳೊಳಗಾಗಿ ಮಾಡುವ ಮಾಟಂಗಳೆಲ್ಲವೂ ಕರ್ಮಶಕ್ತಿಗೆ ಬೀಜ. ಆ ಉಭಯವ ನೇತಿಗಳೆದು ಮಾಡುವುದೆಲ್ಲವೂ ಜ್ಞಾನಶಕ್ತಿಗೆ ಬೀಜ. ಸಕಲವ ವಿಚಾರಿಸಿ, ಅಹುದಲ್ಲಾ ಎಂದು ಹರಿದು ಮಾಡುವುದೆಲ್ಲವೂ ಮುಂದೊಂದ ಕುರಿತು ವಸ್ತುವೆಂಬ ಒಡಲಿಗೆ ರೂಪಾಯಿತ್ತು. ಸ್ವಯವೆಂಬ ಭಾವ ನಿಜದಲ್ಲಿ ನಿಂದಲ್ಲಿ, ಮನಸಂದಿತ್ತು ಮಾರೇಶ್ವರಾ.