Index   ವಚನ - 36    Search  
 
ಕಾಯಕಲ್ಪಿತಕ್ಕೊಳಗಲ್ಲದೆ ಇರಬೇಕು. ಜೀವ ನಾನಾ ಭವಂಗಳಲ್ಲಿ ಬಾರದೆ ಇರಬೇಕು. ಅರ್ತಿಗಾರಿಕೆಯಲ್ಲಿ ಎಲ್ಲ ಹೊತ್ತುಹೋಕಂಗೆ. ನಿಶ್ಚಯದ ಮಾತೇಕೆ ? ಆ ಕುಚಿತ್ತರಿಗೆ ಮುನ್ನವೆ ಮನಸಂದಿತ್ತು ಮಾರೇಶ್ವರಾ.