Index   ವಚನ - 51    Search  
 
ಕ್ರೀಯಲ್ಲಿ ಇಷ್ಟವ ಪೂಜಿಸುವನ್ನಬರ, ಚಿತ್ತದ ತೊಟ್ಟುಬಿಟ್ಟು ಬೆಚ್ಚಂತಿರಬೇಕು. ಭಾವದಿಂದ ಅಧ್ಯಾತ್ಮವನರಿವನ್ನಬರ, ಜೀವಸಂಸಾರವಿಲ್ಲದಿರಬೇಕು. ಇಂತೀ ಎರಡಳಿದು ಒಂದರಲ್ಲಿ ನಿಜವಹನ್ನಬರ, ಕಾಯಕ್ಕೆ ಕರ್ಮ, ಜೀವಕ್ಕೆ ಅರಿವು. ಅರಿವಿಂಗೆ ಕುರುಹುದೋರುವುದಕ್ಕೆ ಮುನ್ನವೆ ಮನಸಂದಿತ್ತು ಮಾರೇಶ್ವರಾ.