Index   ವಚನ - 66    Search  
 
ತನುವಿಂದ ಅನುವನರಿತೆಹೆನೆಂದಡೆ, ಆ ಅನುವಿಂಗೂ ತನುವಿಂಗೂ ಸಂಬಂಧವಲ್ಲ. ಅನುವಿಂದ ತನುವನರಿತೆಹೆನೆಂದಡೆ ಅನು ಬಯಲು, ತನು ರೂಪು. ಕಾಷ್ಠ ಪಾಷಾಣ ಘಟದಲ್ಲಿ ತೋರಿ, ಉರಿವ ಅಗ್ನಿಯಂತೆ, ಒಂದನಳಿದು, ಒಂದನುಳಿದಿಹವಹ್ನಿಯ ತೆರನನರಿದಲ್ಲಿ, ಬೇರೊಂದನ್ಯವ ಕುರುಹಿಡಿದಲ್ಲಿ, ಮನಸಂದಿತ್ತು ಮಾರೇಶ್ವರಾ.