ಭಾವಭಾವಿಸಿದಲ್ಲಿ, ಜೀವ ಸಂಚರಿಸುವಲ್ಲಿ,
ಜ್ಞಾನ ಪರಮನೆಂದು ಅರಿದಲ್ಲಿ,
ಬೇರೊಂದು ಬೀಜವುಂಟೆ ?
ನಾನಾರೆಂಬುದ ತಾನರಿದ ಮತ್ತೆ,
ನಿರ್ವೀಜವಾಗಿ ಮನಸಂದಿತ್ತು ಮಾರೇಶ್ವರಾ.
Art
Manuscript
Music
Courtesy:
Transliteration
Bhāvabhāvisidalli, jīva san̄carisuvalli,
jñāna paramanendu aridalli,
bērondu bījavuṇṭe?
Nānārembuda tānarida matte,
nirvījavāgi manasandittu mārēśvarā.