ರೂಪೆಂಬುದನರಿದು ಸಂಕಲ್ಪಕ್ಕೊಳಗಾಗದೆ,
ಶೂನ್ಯವೆಂಬುದನರಿದು ಸಂಚಾರಕ್ಕೀಡಾಗದೆ,
ಉಭಯಮಾರ್ಗವ ತಿಳಿದು
ಸಂದೇಹವೆಂಬ ಸಂಕಲ್ಪದಲ್ಲಿ ನಿಲ್ಲದೆ,
ನಿಜ ಒಂದೆಂದಲ್ಲಿ, ಮನಸಂದಿತ್ತು ಮಾರೇಶ್ವರಾ.
Art
Manuscript
Music
Courtesy:
Transliteration
Rūpembudanaridu saṅkalpakkoḷagāgade,
śūn'yavembudanaridu san̄cārakkīḍāgade,
ubhayamārgava tiḷidu
sandēhavemba saṅkalpadalli nillade,
nija ondendalli, manasandittu mārēśvarā.