ವಚನ - 701     
 
ಅಂಗದ ಕೈಯಲ್ಲಿ ಲಿಂಗ, ಮನದ ಕೈಯಲ್ಲಿ ಸಂಸಾರ, ಎಂತಯ್ಯಾ ನಿನ್ನ ಪ್ರಾಣಲಿಂಗಿಯೆಂಬೆ? ಹೊರಗೆ ಕುರುಹಾಗಿ ತೋರುತ್ತಿದೆ. ತನುವಿಗೆ ತನು ಸಯವಾಗದು ಮನಕ್ಕೆ ಮನ ಸಯವಾಗದು ಎಂತಯ್ಯಾ ನಿನ್ನ ಪ್ರಾಣಲಿಂಗಿಯೆಂಬೆ ಗುಹೇಶ್ವರಾ.