ಹೂವ ಕೊಯಿವುದಕ್ಕೆ ಮುನ್ನವೆ,
ವಾಸನೆಯ ಕೊಯ್ಯಬೇಕು.
ಲಿಂಗ ಬಹುದಕ್ಕೆ ಮುನ್ನವೆ,
ಅರಿವನರಿಯಬೇಕು.
ನಾನೆಂಬುದಕ್ಕೆ ಮೊದಲೆ,
ವಸ್ತುಭಾವದಲ್ಲಿ ಮನಸಂದಿರಬೇಕು, ಮಾರೇಶ್ವರಾ.
Art
Manuscript
Music
Courtesy:
Transliteration
Hūva koyivudakke munnave,
vāsaneya koyyabēku.
Liṅga bahudakke munnave,
arivanariyabēku.
Nānembudakke modale,
vastubhāvadalli manasandirabēku, mārēśvarā.