•  
  •  
  •  
  •  
Index   ವಚನ - 707    Search  
 
ಅಂಗದಲ್ಲಿ ಅಳವಟ್ಟಿಪ್ಪ ಆಚಾರವೆ ಲಿಂಗವೆಂದರಿದ ಬಸವಣ್ಣನು, ಮನದಲ್ಲಿ ಬೆಳಗುತ್ತಿಪ್ಪ ಅರಿವೆ ಜಂಗಮವೆಂದರಿದ ಬಸವಣ್ಣನು, ಈ ಎರಡರ ಸಂಗವೆ ತಾನೆಂದರಿದನು ಬಸವಣ್ಣನು. ಮಾಡುವ ದಾಸೋಹವೆ ಲಿಂಗಜಂಗಮವೆಂದರಿದ ಬಸವಣ್ಣನು. ನಮ್ಮ ಗುಹೇಶ್ವರಲಿಂಗದಲ್ಲಿ, ಸಂಗನಬಸವಣ್ಣನ ನಿಲವನರಿಯಬೇಕು ಕೇಳಾ ಚಂದಯ್ಯಾ.
Transliteration Aṅgadalli aḷavaṭṭippa ācārave liṅgavendarida basavaṇṇanu, manadalli beḷaguttippa arive jaṅgamavendarida basavaṇṇanu, ī eraḍara saṅgave tānendaridanu basavaṇṇanu. Māḍuva dāsōhave liṅgajaṅgamavendarida basavaṇṇanu. Nam'ma guhēśvaraliṅgadalli, saṅganabasavaṇṇana nilavanariyabēku kēḷā candayyā.
Hindi Translation अंग में मिला आचार को ही लिंग समझा, मन में चमकते ज्ञान को ही जंगम समझा, इन दोनों का संग ही मैं खुद समझा, करनेवाले दासोह ही लिंग जंगम समझा, हमारे गुहेश्व रलिंग में, संगन बसवण्णा की स्थिति जाननी चाहिए, सुनो चंदय्या। Translated by: Eswara Sharma M and Govindarao B N