Index   ವಚನ - 12    Search  
 
ಜಯ ಜಯ ತ್ರಾಹಿ ತ್ರಾಹಿ, ಗರ್ಭದೊಳಗಣ ಶಿಶು ನವಮಾಸವ ಹಾರಿಕೊಂಡಿರ್ದಂದಿರ್ದೆನಯ್ಯಾ. ಎನ್ನ ಜನ್ಮ ಸಫಲವಾಯಿತ್ತಯ್ಯಾ. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ಬಸವರಾಜದೇವರ ದಯದಿಂದ ಪ್ರಭುದೇವರ ಶ್ರೀಮೂರ್ತಿಯಂ ಕಂಡು ಬದುಕಿದೆನು. ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ ಶರಣು ಶರಣಾರ್ಥಿ ಸಕಲಪುರಾತರಿಗೆ.