ತನು ಕರಣೇಂದ್ರಿಯ ವಿಷಯಾದಿ ವಿಕಾರಂಗಳ ಹಿಂಗಿ,
ತನ್ನ ನಿಜಸ್ವರೂಪವನರಿದು, ಅಂಗಲಿಂಗಸಂಬಂಧಿಯಾಗಿ,
ಲೋಕದ ಜನರ ಸಂಗವ ತೊಲಗಿ, ಕರ್ಮದ ಹೊರೆಯಂ ಬಿಸುಟು,
ಸೀಮೆಯಂ ಬಿಟ್ಟು, ಉಪಾಧಿಯಿಲ್ಲದೆ ಜೀವ ಭಾವವ ಬಿಟ್ಟು,
ಮಲತ್ರಯವ ಹೊದ್ದದೆ, ನಿತ್ಯವಾದ ವಸ್ತುವೆ ತಾನಾಗಿ ನಿಂದ
ಮಹಾಜ್ಞಾನ ಜಂಗಮವ ನೋಡಿರಯ್ಯ. ಅದೆಂತೆಂದಡೆ:
ನಿಸ್ಸಂಗತ್ವಂ ನಿರಾಭಾರಂ ನಿಸ್ಸೀಮಂ ನಿರುಪಾಧಿಕಂ
ನಿರ್ದೇಹಂ ನಿರ್ಮಲಂ ನಿತ್ಯಂ ತಸ್ಯ ಜಂಗಮ ಲಕ್ಷಣಂ||
ಇಂತೆಂದುದಾಗಿ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ
ಶಾಂತಚನ್ನಮಲ್ಲಿಕಾರ್ಜುನದೇವಯ್ಯಾ,
ನಿಮ್ಮ ಘನಕ್ಕೆ ಘನವಾದ ಪ್ರಭುದೇವರ ಘನವ ನೀವೆ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
Art
Manuscript
Music
Courtesy:
Transliteration
Tanu karaṇēndriya viṣayādi vikāraṅgaḷa hiṅgi,
tanna nijasvarūpavanaridu, aṅgaliṅgasambandhiyāgi,
lōkada janara saṅgava tolagi, karmada horeyaṁ bisuṭu,
sīmeyaṁ biṭṭu, upādhiyillade jīva bhāvava biṭṭu,
malatrayava hoddade, nityavāda vastuve tānāgi ninda
mahājñāna jaṅgamava nōḍirayya. Adentendaḍe:
Nis'saṅgatvaṁ nirābhāraṁ nis'sīmaṁ nirupādhikaṁ
nirdēhaṁ nirmalaṁ nityaṁ tasya jaṅgama lakṣaṇaṁ||
intendudāgi, śud'dhasid'dha prasid'dha prasanna prabhuve
śāntacannamallikārjunadēvayyā,
nim'ma ghanakke ghanavāda prabhudēvara ghanava nīve ballirallade
nānetta ballenayyā, nim'ma dharma nim'ma dharma nim'ma dharma.