Index   ವಚನ - 19    Search  
 
ಬೆರಸಲಿಲ್ಲದವನ ನೋಟ, ಲೇಸಿಲ್ಲದವನ ಮಾಟ, ಕಂಗಳ ಸೂತಕ ಹರಿಯದವನ ಅಂಗದ ಕೂಟ, ಅದೆಂದಿಗೆ ನಿಜವಪ್ಪುದು ? ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ಪ್ರಭುದೇವರ ನೀವೆ ಬಲ್ಲಿರಿ.