Index   ವಚನ - 6    Search  
 
ಪರಮನಿಂದ ಮನ, ಮನದಿಂದ ಬುದ್ಧಿ, ಬುದ್ಧಿಯಿಂದ ಚಿತ್ತ, ಚಿತ್ತದಿಂದ ಅಹಂಕಾರ, ಅಹಂಕಾರದಿಂದವೆ ಸರ್ವಕರಣೇಂದ್ರಿಯಂಗಳ ಮೊತ್ತದ ಬಳಗ, ಇಂತೀ ಗುಣವ ಚಿತ್ತುವಿನಿಂದ ವಿಚಾರಿಸಿ, ಪರಮನ ಪ್ರಕಾರವ ಬಂಧಿಸಿ, ನಿಂದಿಸಿದವಂಗಲ್ಲದೆ ಹಿಂದಣ ಮುಂದಣ ಬಂಧ ಬಿಡದು. ಆನಂದ ಹಿಂಗೆ, ಅಶ್ರುಜಲ ನಿಂದು, ಚಿತ್ತು ಚಿದಾದಿತ್ಯದಲ್ಲಿ ನಷ್ಟವನೆಯ್ದಿದ ಮತ್ತೆ, ಹಸುಬೆಯ ವ್ಯವಹಾರ ಬಟ್ಟಬಯಲು, ಊರ್ಧ್ವರೇತೋಮೂರ್ತಿ ಶ್ವೇತಸ್ವಯಂಭು ಕಪಿಲೇಶ್ವರಲಿಂಗವ ಕೂಡಿದ ಮತ್ತೆ.