Index   ವಚನ - 8    Search  
 
ಮುರಿಗಂಚು ತವರ ಹಿತ್ತಾಳೆ ತಾಮ್ರ ಇವು ಮೊದಲಾದ ಲೋಹವ ತನ್ನಿ. ಕಳ್ಳವಣ, ಕಂದುವೆಳ್ಳ ಮೊದಲಾದ ರೊಕ್ಕವ ತನ್ನಿ. ನಿಮಗಲ್ಲದ ಒಡವೆ ಎನಗೆ. ನಿಮಗೆ ಒಳ್ಳಿ[ತ]ಹ ಒಡವೆಯ ಕೊಡುವೆ. ಎನ್ನ ಕಂಬಳಿಯ [ಚೀಲವಂ] ಬಿಡುವೆ. ಅದರಲ್ಲಿದ್ದ ಸಂಬಾರದ್ರವ್ಯವ ಕೊಡುವೆನೆಂಬುದಕ್ಕೆನ್ನ ನಂಬಿ ಬನ್ನಿ. ಊರ್ಧ್ವರೇತೋಮೂರ್ತಿ ಶ್ವೇತಸ್ವಯಂಭು ಕಪಿಲೇಶ್ವರಲಿಂಗದಾಣತಿ.