Index   ವಚನ - 10    Search  
 
ಸದ್ಭಕ್ತನಾದಡೆ ಪರಾಪರಸ್ತ್ರೀಯ ಕೂಡಬೇಕು. ಸಜ್ಜನಪತಿವ್ರತೆಯಾದಡೆ ಪರಾಪರಪುರುಷನ ನೆರೆಯಬೇಕು. ಇದು ಸದ್ಭಕ್ತಿಯ ಹಾದಿ, ಸದಾಸನ್ನದ್ಧರ ಉಭಯದ ಯೋಗ ಈ ಗುಣವ ಒಳಗು ತಿಳಿದು, ಹೊರಗೆ ಮರೆದಡೆ, ಊರ್ಧ್ವರೇತೋಮೂರ್ತಿ ಶ್ವೇತಸ್ವಯಂಭು ಕಪಿಲೇಶ್ವರಲಿಂಗವ ಕೂಡಬಲ್ಲಡೆ.