Index   ವಚನ - 8    Search  
 
ಶುಕ್ಲ ಶೋಣಿತ ಮಜ್ಜೆ ಮಾಂಸ ಹಸಿವು ತೃಷೆ ವ್ಯಸನ ವಿಷಯಾದಿಗಳೊಂದೆ ಭೇದ. ಮಾಡುವ ಕೃಷಿ ವ್ಯವಸಾಯ ಹಲವಲ್ಲದೆ, ತೋರುವ ತೋರಿಕೆ ಅರಿವಾತ್ಮನೊಂದೆ ಭೇದ. ಆವ ಕುಲವಾದಡೂ ಅರಿದಲ್ಲಯೆ ಪರತತ್ವಭಾವಿ. ಮರೆದಲ್ಲಿಯೆ ಮಲಮಾಯಾಸಂಬಂಧಿ, ಇಂತೀ ಉಭಯವನರಿದು ಮರೆಯಲಿಲ್ಲ. ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ, ಅರಿ ನಿಜಾ[ತ್ಮಾ] ರಾಮ ರಾಮನಾ.