ಅಂಗದಲ್ಲಿ ಲೀಯವಾಗಿ ತೋರುವುದೆಲ್ಲ
ರೂಪೋ, ವಿರೂಪೋ ? ಎಂಬುದ ತಾನರಿತಲ್ಲಿ,
ಅಂಗ ಅರಿಯಿತ್ತೋ, ಆತ್ಮ ಅರಿಯಿತ್ತೋ ?
ಇಂತೀ ಉಭಯದ ಸಂದಣಿಯಲ್ಲಿ ಗೊಂದಳಗೊಳಲಾರದೆ,
ಆರಾರೆಂದಂತೆ ಆರೈಕೆಯಲ್ಲಿದ್ದು; ತಾನು ತಾನಾದವಂಗೆ
ಮತ್ತೇನೂ ಎನಲಿಲ್ಲ, ಕಾಮಧೂಮ ಧೂಳೇಶ್ವರಾ.
Art
Manuscript
Music
Courtesy:
Transliteration
Aṅgadalli līyavāgi tōruvudella
rūpō, virūpō? Embuda tānaritalli,
aṅga ariyittō, ātma ariyittō?
Intī ubhayada sandaṇiyalli gondaḷagoḷalārade,
ārārendante āraikeyalliddu; tānu tānādavaṅge
mattēnū enalilla, kāmadhūma dhūḷēśvarā.