Index   ವಚನ - 14    Search  
 
ಅರಿವು ಅರಿದಲ್ಲದೆ ಲಿಂಗವೆಂಬ ರೂಪಿಲ್ಲ. ಅರಿವು ಅರಿದಲ್ಲದೆ ಜೀವಭಾವ ಹಿಂಗದು. ಅರಿವೆಂಬ ಸೂತಕ ಹೆರೆಹಿಂಗುವನ್ನಬರ, ನಾ ನೀನೆಂಬನ್ನಕ್ಕ ಒಡಲು. ಅದೇನು ಕಾರಣ ಹೇಳಾ, ಕಾಮಧೂಮ ಧೂಳೇಶ್ವರಾ.