ಆಧ್ಯಾತ್ಮಿಕದಿಂದಾವ ದೇಹವ,
ವ್ಯಾಧಿ ಬಾಧಿಸುವದಕ್ಕೆ ಮುನ್ನವೆ
ಬೇಗ ಬೇಗ ಶಿವನ ಭಜಿಸಿರೊ.
ದೇಹಧರ್ಮವು ಆರ ವಶವಲ್ಲ.
ದೇವ ದಾನವ ಮಾನವಾದಿಗಳಾದಡೂ
ಆವುದಾನೊಂದು ವ್ಯಾಧಿ ಬಿಡವು.
'ತೇನ ವಿನಾ ತೃಣಾಗ್ರಮಪಿ ನ ಚಲತಿ'
ಎಂದುದಾಗಿ, ಅಂದಂದಿಗೆ ದಿನ ತುಂಬಿದಂತೆ ನಿಶ್ಚೈಸಿ,
ಕಾಮಧೂಮ ಧೂಳೇಶ್ವರನನೊಲಿಸಲೋಸುಗ
ಬಂದ ಬಳಿಕ ಮರೆಯದಿರಿರೊ.