ಆವುದ ಹಿಡಿದು ಬೀಸಿದಲ್ಲಿಯೂ ಗಾಳಿ ತಪ್ಪದು.
ಏನ ಹಿಡಿದು ನುಡಿದಿಹೆನೆಂಬನ್ನಕ್ಕ ಮನದ ಸೂತಕ ಮೊದಲು.
ಒಂದು ಕಂಡು ಒಂದರಲ್ಲಿ ಕೂಡಿಹೆನೆಂಬನ್ನಬರ,
ಅರಿವಿನ ಸೂತಕ ಬಿಡದು.
ದೀಪವ ಕೆಡಿಸಿದ ಸೆರಗಿನಂತೆ,
ಅನಲನಾಹುತಿಗೊಂಡ ಸಾರದಂತೆ,
ಬಯಲು ಬಯಲ ಕೂಡಿದ ನಿರಾಳಕ್ಕೆ ಲಕ್ಷವುಂಟೆ ?
ಅರಿವುದಕ್ಕೆ ಮುನ್ನವೆ ಅರಿದ ಅರಿವನು,
ಕರಿಗೊಂಡಲ್ಲಿಯೆ ಲೋಪ, ಕಾಮಧೂಮ ಧೂಳೇಶ್ವರಾ.