Index   ವಚನ - 722    Search  
 
ಅಂಗಳ[ದ] ಬಾಗಿಲ ನೆಲೆಯಲ್ಲಿ ನಿಂದಿದ್ದ ಲಿಂಗವನರಿದುದಿಲ್ಲವೆ ಬಸವಣ್ಣಾ? ಸುಸಂಗಿ ನಿರಂಗಿ ನಿಷ್ಕಲ ಪರಬ್ರಹ್ಮ ಮರುಳಶಂಕರಲಿಂಗ! ಪ್ರಸಾದದ ಕುಳಿಯಲ್ಲಿ ನಿಜನಿವಾಸದ ಅಂಗವ ನೋಡು, ಗುಹೇಶ್ವರಲಿಂಗದಲ್ಲಿ ಸಂಗನ ಬಸವಣ್ಣಾ.