Index   ವಚನ - 31    Search  
 
ಉತ್ಪತ್ಯ ಪಿಂಡವೆಲ್ಲಕ್ಕೂ ಜನನವೊಂದೆ ಭೇದ. ಲಯವಹ ಘಟಕ್ಕೆ ಹಲವು ತೆರನುಂಟು. ಹಲವು ತೆರದ ಲಯವ ಬಲ್ಲಡೆ, ಬೇರೊಂದು ಕುಲಹೊಲೆಸೂತಕವೆಂಬುದುಂಟೆ? ಬಂದ ಯೋನಿಯ ಹೊಂದುವ ಘಟದ ಉಭಯಸಂಧಿಯಲ್ಲಿ ಸಿಕ್ಕದೆ, ನಿಂದ ನಿಜವೆ ತಾನಾದವಂಗೆ ಬೇರೊಂದು ಇಲ್ಲಾ ಎಂದೆ, ಕಾಮಧೂಮ ಧೂಳೇಶ್ವರಾ.