•  
  •  
  •  
  •  
Index   ವಚನ - 724    Search  
 
ಅಂಗೈಯೊಳಗೊಂದು ಅರಳ್ದ ತಲೆಯ ಹಿಡಿದುಕೊಂಡು ಕಂಗಳ ಮುತ್ತ ಪವಣಿಸುವಾಕೆ ನೀನಾರು ಹೇಳಾ? ಸಂದ ಸಂಪಿಗೆಯರಳ ತುಂಬಿ ಬಂದುಂಬ ಭೇದವನರಿಯದೆ ಹಂಬಲಿಸುವ ಪರಿತಾಪವೇನು ಹೇಳಾ? ಒಂದೆಂಬೆನೆ ಎರಡಾಗಿದೆ, ಎರಡೆಂಬೆನೆ ಒಂದಾಗಿದೆ. ಅರಿವಿನೊಳಗಣ ಮರೆಹಿದೇನು ಹೇಳಾ? ದುಃಖವಿಲ್ಲದ ಅಕ್ಕೆ, ಅಕ್ಕೆಯಿಲ್ಲದ ಅನುತಾಪ ನಮ್ಮ ಗುಹೇಶ್ವರಲಿಂಗದಲ್ಲಿ ತೋರುತ್ತಿದೆ. ನೀನಾರೆಂದು ಹೇಳಾ ಎಲೆ ಅವ್ವಾ?
Transliteration Aṅgaiyoḷagondu araḷda taleya hiḍidukoṇḍu kaṅgaḷa mutta pavaṇisuvāke nīnāru hēḷā? Sanda sampigeyaraḷa tumbi bandumba bhēdavanariyade hambalisuva paritāpavēnu hēḷā? Ondembene eraḍāgide, eraḍembene ondāgide. Arivinoḷagaṇa marehidēnu hēḷā? Duḥkhavillada akke, akkeyillada anutāpa nam'ma guhēśvaraliṅgadalli tōruttide. Nīnārendu hēḷā ele avvā?
Music Courtesy:
Video
Hindi Translation हथेली में एक विकसित सिर पकडकर आँखों के मोती गूंथनेवाली तू कौन कह ? खिले चंपक पर भ्रमर आकर चूसने का भेद नहीं जानते तडपने का परिताप क्या कह ? एक कहें तो दो हुए हैं, दो कहें तो एक हुआ है। ज्ञान के अंदर की भूल क्या कह ? बिना दुःख रोदन, बिना रोदन अनुताप हमारे गुहेश्वर लिंग में दिखा रहा है। तू कौन कह अरे अव्वा ? Translated by: Eswara Sharma M and Govindarao B N