Index   ವಚನ - 58    Search  
 
ಧೀರೆಯಾದ ಮಾಸ್ತಿಗೆ ವೀರತ್ವವಲ್ಲದೆ, ಧಾರುಣಿಯ ಜನರೆಲ್ಲರೂ ಹೇಡಿ ಮಾಸ್ತಿ ಎಂದ ಬಳಿಕ, ವೀರತ್ವ ಎಲ್ಲಿಯದೋ ? ಧೀರೆಯಾದ ಮಾಸ್ತಿಯ ವೀರರಾಗಿದ್ದವರು ಮುಡಿಯಲರ, ಹಿಡಿದ ನಿಂಬೆಯ ಹಣ್ಣ ಬೇಡಿದಂತೆ ಕೊಡವಳು ದೃಢವುಳ್ಳ ವೀರರು ತರುವರು, ದೃಷ್ಟವ ನೋಡಿರಣ್ಣಾ. ಕೊಡುವಾಕೆ ದಹನವಾದಳು, ಕೊಂಬಾತ ರೂಪಾದ. ಈತ ಬೇಡಿದ ಇಷ್ಟವ ಕೊಟ್ಟಾತನು ಯಾತವೋ, ಆತ್ಮನೋ ? ಬಲ್ಲಡೆ ನೀವು ಹೇಳಿರಣ್ಣಾ. ನಿಮ್ಮ ಜ್ಞಾನದ ಮುಸುಕ ತೆರದು ನಿಮ್ಮ ಬಲ್ಲಂತಿಕೆಯ ಕಾಣಬಹುದು. ಕಾಮಧೂಮ ಧೂಳೇಶ್ವರಲಿಂಗವನರಿವುದಕ್ಕೆ ಇದೇ ದೃಷ್ಟ.