Index   ವಚನ - 66    Search  
 
ನೋಡುವ ನೋಟ ತಾನೆಯಾದ ಮತ್ತೆ, ನೋಡಿಸಿಕೊಂಬುದೊಂದೂ ಇಲ್ಲ. ಕೂಡಿಹೆನೆಂಬ ಕೂಡ ಎರಡಳಿದಲ್ಲಿ, ಉಭಯವೆಂಬ ನಾಮವಿಲ್ಲ. ಅರ್ಪಿಸಿಕೊಂಬುದೊಂದು ವಸ್ತು. ಅರ್ಪಿಸಿಕೊಂಬುದೊಂದು ಚಿತ್ತ. ಎರಡೆಂಬ ಭಾವವಾದಲ್ಲಿ ಲಿಂಗಕ್ಕೆ ದೂರ. ಅರಿದ ಅರಿವಿಂಗೆ ಸೂತಕ. ಪರುಷದ ಪುತ್ಥಳಿಯಲ್ಲಿ, ಲೋಹದ ಅವಯವಂಗಳುಂಟೆ ? ಪರಿಪೂರ್ಣವಾದ ಪರಂಜ್ಯೋತಿಗೆ ಪರಕ್ಕೆ ಕೊಟ್ಟು, ಆ ಪರವನರಿದೆಹೆನೆಂಬ ಪರಿಭ್ರಮಣದ ಸೂತಕವಿಲ್ಲ. ಸಂದಿಲ್ಲದ ವಸ್ತುವಿಗೆ ಮೇಲೆ ಕಂಡೆಹೆನೆಂದಡೆ ಒಂದೂ ಇಲ್ಲ, ಕಾಮಧೂಮ ಧೂಳೇಶ್ವರಾ.