ಮನವಚನಕಾಯ ತ್ರಿಕರಣಶುದ್ಧವಾಗಿ
ಭಕ್ತಂಗೆ ಸತ್ಯ, ವಿರಕ್ತಂಗೆ ಜ್ಞಾನವೆಂದು
ತತ್ತುಗೊತ್ತನಿಕ್ಕಿ ಹಚ್ಚಿ ಹಾ[ಕಿ]ದಲ್ಲಿ,
ಈ ಉಭಯದ ಚಿತ್ತದಲ್ಲಿ ವೇಧಿಸುವ ವಸ್ತು ಆವುದು ?
ಭಕ್ತಿಗೂ ಜ್ಞಾನ, ವಿರಕ್ತಿಗೂ ಜ್ಞಾನ.
ಅದು ತನ್ನಬೆಳಗಿನಲ್ಲಿ ತನ್ನ ಕಾಣಿಸಿಕೊಂಬಂತೆ
ಆ ಗುಣ ಉಭಯಭಿನ್ನವಿಲ್ಲ.
ಕಾಮಧೂಮ ಧೂಳೇಶ್ವರನೆಂಬುದಕ್ಕೆ ಎಡೆದೆರಪಿಲ್ಲ.