ಸಂಚಾರದಿಂದ ತರಗೆದ್ದು, ತನ್ನಂಗದ ಸಂಚಿತವ ಬಿಟ್ಟು,
ವಾಯುವಿನ ಸಂಚಾರದಲ್ಲಿ ಎಯ್ದಿ, ಸಂಚಾರ ನಿಂದು,
ಆ ತರಗು ಮತ್ತೊಂದು ಸೀಮೆಯ ಸಂಚಿತದಲ್ಲಿ ನಿಂದು,
ಆ ತರಗು ಮತ್ತೊಂದು ಸಂಚಾರಕ್ಕೆ ಒಳಗಾಯಿತ್ತು.
ಇಂತೀ ಕಾಯಸಂಚಿತವ ಬಿಟ್ಟು,
ವಸ್ತುವಿನ ಶಂಕೆಯಲ್ಲಿ ಒಳಗಾಗಬೇಕೆಂಬುದು,
ಆ ಗುಣ ಶಂಕೆಯೋ ?, ನಿಶ್ಯಂಕೆಯೋ? ಎಂಬುದಕ್ಕೆ ಮುನ್ನವೆ
ಅರಿದು ಮರೆದಲ್ಲಿ,
ಕಾಮಧೂಮ ಧೂಳೇಶ್ವರನು ಸಂದು ಸಂಶಯದವನಲ್ಲ.