ಅಪ್ಪುವಿನ ಶಿಲೆಯ, ಉಳಿಯ ಮೊನೆಯಲ್ಲಿ ಚಿತ್ರಿಸಬಹುದೆ ?
ಅರಗಿನ ಪಟವ, ಉಳಿಯ ಮೊನೆಯಲ್ಲಿ ಅಕ್ಷರವ ಬರೆಯಬಹುದೆ ?
ಮೃತ್ತಿಕೆಯ ಹರುಗೋಲನೇರಿ, ನದಿಯ ತಪ್ಪಲಿಗೆ ಹೋಗಬಹುದೆ ?
ನಿಜನಿಶ್ಚಯವನರಿಯದವನ ವಾಚಾರಚನೆ ಇಷ್ಟಲ್ಲದಿಲ್ಲ.
ನಿಜತತ್ವವನರಿದವನ ವಾಚಾರಚನೆಯ ಕುರುಹೆಂತುಟೆಂದಡೆ
ಶಿಲೆಯೊಳಗಣ ಸುರಭಿಯಂತೆ,
ಪ್ರಳಯದೊಳಗಾಗದ ನಿಜನಿವಾಸದಂತೆ,
ಆಯದ ಗಾಯದಂತೆ, ಸಂಗಾಯದ ಸುಖದಂತೆ.
ಇಂತೀ ಭಾವರಹಿತವಾದ ಭಾವಜ್ಞನ ತೆರ,
ಕೂಗಿಂಗೆ ಹೊರಗು, ಮಹಾಮಹಿಮ ಮಾರೇಶ್ವರಾ.
Art
Manuscript
Music
Courtesy:
Transliteration
Appuvina śileya, uḷiya moneyalli citrisabahude?
Aragina paṭava, uḷiya moneyalli akṣarava bareyabahude?
Mr̥ttikeya harugōlanēri, nadiya tappalige hōgabahude?
Nijaniścayavanariyadavana vācāracane iṣṭalladilla.
Nijatatvavanaridavana vācāracaneya kuruhentuṭendaḍe
śileyoḷagaṇa surabhiyante,
praḷayadoḷagāgada nijanivāsadante,
āyada gāyadante, saṅgāyada sukhadante.
Intī bhāvarahitavāda bhāvajñana tera,
kūgiṅge horagu, mahāmahima mārēśvarā.