Index   ವಚನ - 13    Search  
 
ಅಶನದಾಸೆಗಾಗಿ ಆಚಾರವ ತಪ್ಪಿ, ವಿಷಯದಾಸೆಗಾಗಿ ವಿರಕ್ತಿಯ ಬಿಟ್ಟು, ಸಕಲರ ಕೂಟದಲ್ಲಿ ವಿಕಳತೆಗೊಂಬ ಪ್ರಕೃತಿಭಾವಿಗುಂಟೆ ನಿಜಭಕ್ತಿ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ ?