ಇಚ್ಫಾಶಕ್ತಿಸ್ವರೂಪ ವರ್ತುಳವಾಗಿ,
ಕ್ರಿಯಾಶಕ್ತಿಸ್ವರೂಪ ಗೋಮುಖವಾಗಿ,
ಜ್ಞಾನಶಕ್ತಿಸ್ವರೂಪ ಸಲಾಕೆರೂಪಾಗಿ,
ತ್ರಿವಿಧಭೇದವ ಒಡಗೂಡಿ ತ್ರಿವಿಧಶಕ್ತಿ ಲಿಂಗವಾಯಿತ್ತು.
ಇಚ್ಫಾಶಕ್ತಿಗೆ ಕ್ರೀ, ಕ್ರಿಯಾಶಕ್ತಿ ಜ್ಞಾನ,
ಜ್ಞಾನಶಕ್ತಿಗೆ ಸರ್ವಭಾವಕೂಟ.
ಭಾವ ಇಷ್ಟದಲ್ಲಿ ನಿಂದು, ತ್ರಿವಿಧವ ತೊಟ್ಟು ಬಿಟ್ಟು,
ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ ಇದೇ ಗೊತ್ತು.
Art
Manuscript
Music
Courtesy:
Transliteration
Icphāśaktisvarūpa vartuḷavāgi,
kriyāśaktisvarūpa gōmukhavāgi,
jñānaśaktisvarūpa salākerūpāgi,
trividhabhēdava oḍagūḍi trividhaśakti liṅgavāyittu.
Icphāśaktige krī, kriyāśakti jñāna,
jñānaśaktige sarvabhāvakūṭa.
Bhāva iṣṭadalli nindu, trividhava toṭṭu biṭṭu,
aighaṭadūra rāmēśvaraliṅgavanarivudakke idē gottu.