ಇಷ್ಟದ ಪೂಜೆಯನರಿವುದಕ್ಕೆ
ಕೋಲ ಸುತ್ತಿದ ನೂಲಿನಂತಿರಬೇಕು.
ಭಾವದ ಭ್ರಮೆ ಹಿಂಗುವುದಕ್ಕೆ
ಸಾವಧಾನದಲ್ಲಿ ಸಾವಯವವಾದ ಸಾವಿನಂತೆ,
ಭಾವ ಎಯ್ದಬೇಕು.
ಇಷ್ಟ ಪ್ರಾಣದಲ್ಲಿ ಉರಿ ಅರಗಿನ ಯೋಗದಂತೆ,
ಕ್ರೀಯಲ್ಲಿ ಕರಗಬೇಕು.
ಇದೇ ದೃಷ್ಟ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
Art
Manuscript
Music
Courtesy:
Transliteration
Iṣṭada pūjeyanarivudakke
kōla suttida nūlinantirabēku.
Bhāvada bhrame hiṅguvudakke
sāvadhānadalli sāvayavavāda sāvinante,
bhāva eydabēku.
Iṣṭa prāṇadalli uri aragina yōgadante,
krīyalli karagabēku.
Idē dr̥ṣṭa, aighaṭadūra rāmēśvaraliṅgavanarivudakke.