Index   ವಚನ - 25    Search  
 
ಊರ್ಧ್ವಮುಖದಲ್ಲಿಯೈದಿದ ವಿಹಂಗ, ಅಧೋಮುಖದಲ್ಲಿ ಧರೆಯ ನೋಡಿ, ತಾನಡರುವ ತೆರನ ಕಾಬಂತೆ, ತುರೀಯದಲ್ಲಿಯೈದಿ, ತೂರ್ಯಾತೀತದಲ್ಲಿ ನೋಡಿ, ತತ್ವದಲ್ಲಿ, ನಿಶ್ಚಯವ ಮಾಡಬೇಕು, ಇಷ್ಟಲಿಂಗವ. ಆ ಇಷ್ಟ ನಿಶ್ಚಯದ ನಿಜತತ್ವದಲ್ಲಿ ಆಶ್ರಯಿಸಿ, ಬಚ್ಚಬಯಲಾಗಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.