ಐದು ಸರ್ಪಂಗಳಿಗೆ ತನು ಒಂದು, ದಂತವೆರಡು.
ಸರ್ಪ ಕಡಿದು ಸತ್ತ ಹೆಣನು ಸುಳಿದಾಡುವುದ ಕಂಡೆ.
ಈ ನಿತ್ಯವನರಿಯದ ಠಾವಿನಲ್ಲಿ,
ಭಕ್ತಿಯೆಲ್ಲಿಯದೊ ಗುಹೇಶ್ವರಾ?
Transliteration Aidu sarpaṅgaḷige tanu ondu, dantaveraḍu.
Sarpa kaḍidu satta heṇanu suḷidāḍuvuda kaṇḍe.
Ī nityavanariyada ṭhāvinalli,
bhaktiyelliyado guhēśvarā?
Hindi Translation पाँच सर्पों का एक शरीर है, दो दाँत।
सर्प दंशन से मरी लाश विचरती देखा।
इस नित्य को नजाननेवाली स्थिति में
कहाँ की भक्ति है गुहेश्वरा ?
Translated by: Eswara Sharma M and Govindarao B N
Tamil Translation ஐந்து பாம்புகளுக்கு ஓருடல், இரு பற்கள்
பாம்பு தீண்டி மடிந்த பிணம் சுழன்றாடியதைக் கண்டேன்
நிலைத்த மெய்ப்பொருளை அறியாத இடத்திலே
பக்தி எங்ஙனம் அரும்பும் குஹேசுவரனே?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಈ ಠಾವಿನಲ್ಲಿ = ಜೀವಾತ್ಮನ ಈ ಅವಸ್ಥೆಯಲ್ಲಿ; ಐದು ಸರ್ಪಂಗಳು = ಐದು ಜ್ಞಾನೇಂದ್ರಿಯಗಳು; ತನು ಒಂದು = ಆ ಸರ್ಪಂಗಳಿಗೆ ತನುವಿನಂತೆ ಇರುವ ಮನಸ್ಸು ಒಂದು.; ದಂತವೆರಡು = ದಂತದಂತಿರುವ ಅಹಂ ಮತ್ತು ಮಮ ಎಂಬ ಭಾವನೆಗಳು ಎರಡು.; ನಿತ್ಯವನರಿಯದ = ನಿತ್ಯವಾದ, ತನ್ನ ಮೂಲ ಸತ್ಯವಾದ ಪರಮಾತ್ಮನು ಇದ್ದಾನೆ ಎಂಬ ಶ್ರದ್ದೆ ಇರದ.; ಭಕ್ತಿ ಎಲ್ಲಿಯದು = ಭಕ್ತಿ ಹೇಗೆ ಉಂಟಾದೀತು?; ಸರ್ಪ = ಆ ಪಂಚವೃತ್ತಿಗಳಿಂದ ಕೂಡಿದ, ಅಹಂ-ಮಮ ಭಾವಗಳಿಂದ ಪುಷ್ಪವಾದ, ಮಾಯಾಕತ್ತಲೆಯಿಂದ ಆವೃತ್ತಗೊಂಡ ಮನಸ್ಸು.;
Written by: Sri Siddeswara Swamiji, Vijayapura