•  
  •  
  •  
  •  
Index   ವಚನ - 740    Search  
 
ಅಕಲ್ಪಿತನೆಂಬ ಭಕ್ತ ಮಾಡಿದ ಸೈದಾನವ ನೋಡಾ! ಅನಂತಕೋಟಿ ಅಜಾಂಡಂಗಳೆ ಸೈದಾನವಾಗಿ, ಸವಿಕಲ್ಪಿತ ಸುಖಂಗಳೆಂಬವೆ ಶಾಕವಾಗಿ, ಸರ್ವಸ್ವಾದವೆಂಬುದೆ ಅಭಿಗಾರವಾಗಿ, ಇವೆಲ್ಲವನು ಸಹಜವೆಂಬ ಭಾಜನದಲ್ಲಿ ಎಡೆ ಮಾಡುತ್ತಿರಲು ಉಣಬಂದ ಹಿರಿಯರು ಉಣುತ್ತಿದ್ದರು ನೋಡಾ! ನಿರ್ವಿಕಲ್ಪವೆಂಬ ಮಹಂತ ಬರಲು ಸೈದಾನವಡಗಿತ್ತು ಭಾಜನ ಉಳಿಯಿತ್ತು. ಆ ಭಾಜನವ ಉತ್ತರ ನಿರಾಳದಲ್ಲಿ ಅಳವಡಿಸಿಕೊಳಲು ನಿಶ್ಚಳ ಘನಪ್ರಸಾದವಾಯಿತ್ತು ಗುಹೇಶ್ವರಾ.
Transliteration Akalpitanemba bhakta māḍida saidānava nōḍā! Anantakōṭi ajāṇḍaṅgaḷe saidānavāgi, savikalpita sukhaṅgaḷembave śākavāgi, sarvasvādavembude abhigāravāgi, ivellavanu sahajavemba bhājanadalli eḍe māḍuttiralu uṇabanda hiriyaru uṇuttiddaru nōḍā! Nirvikalpavemba mahanta baralu saidānavaḍagittu bhājana uḷiyittu. Ā bhājanava uttara nirāḷadalli aḷavaḍisikoḷalu niścaḷa ghanaprasādavāyittu guhēśvarā.
Hindi Translation अकल्पित जैसे भक्त किया भोग देखा। अनंतकोटि विश्व ही भोग बनकर, सवि कल्पित सुख ही सब्जी बनकर, सर्वस्वाद जैसे अभिघार बनकर, इन सब सहज जैसे थाली में परोसते रहते खाने आये बुजुर्ग खा रहे थे देखा! निर्विकल्प जैसे महंत आने से भोग रुका था, आहार बचा था। उस थाली का उत्तर निराल में अपनाने से स्थिर घन प्रसाद बना गुहेश्वरा। Translated by: Eswara Sharma M and Govindarao B N