Index   ವಚನ - 104    Search  
 
ಸ್ವಪ್ನದ ಭಾಷೆ, ಮರ್ತ್ಯರ ಮುಟ್ಟದ ಭಕ್ತಿ ಚಿತ್ತವನರಿಯದೆ ಕಾಡುವನ ಯುಕ್ತಿ, ಮೃತ್ತಿಕೆಯ ಬೊಂಬೆಯು ಅಪ್ಪುವಿನ ಮಂದಿರಕ್ಕೆ ಹೋದಂತಾಯಿತ್ತು. ಐಘಟದೂರ ರಾಮೇಶ್ವರಲಿಂಗವನರಿ.