ಎನ್ನ ಘ್ರಾಣಕ್ಕೆ ಆಚಾರಲಿಂಗವಾದಾತ ಬಸವಣ್ಣ.
ಎನ್ನ ಜಿಹ್ವೆಗೆ ಗುರುಲಿಂಗವಾದಾತ ಬಸವಣ್ಣ.
ಎನ್ನ ತ್ವಕ್ಕಿಗೆ ಜಂಗಮಲಿಂಗವಾದಾತ ಬಸವಣ್ಣ.
ಎನ್ನ ನೇತ್ರಕ್ಕೆ ಶಿವಲಿಂಗವಾದಾತ ಬಸವಣ್ಣ.
ಎನ್ನ ಶ್ರೋತ್ರಕ್ಕೆ ಪ್ರಸಾದಲಿಂಗವಾದಾತ ಬಸವಣ್ಣ.
ಎನ್ನ ಹೃದಯಕ್ಕೆ ಮಹಲಿಂಗವಾದಾತ ಬಸವಣ್ಣ.
ಇಂತಿದನರಿದೆನಾಗಿ ಗವರೇಶ್ವರಲಿಂಗದಲ್ಲಿರ್ದೆನಯ್ಯಾ.
Art
Manuscript
Music
Courtesy:
Transliteration
Enna ghrāṇakke ācāraliṅgavādāta basavaṇṇa.
Enna jihvege guruliṅgavādāta basavaṇṇa.
Enna tvakkige jaṅgamaliṅgavādāta basavaṇṇa.
Enna nētrakke śivaliṅgavādāta basavaṇṇa.
Enna śrōtrakke prasādaliṅgavādāta basavaṇṇa.
Enna hr̥dayakke mahaliṅgavādāta basavaṇṇa.
Intidanaridenāgi gavarēśvaraliṅgadallirdenayyā.